ಅಭಿಪ್ರಾಯ / ಸಲಹೆಗಳು

ಶೈಕ್ಷಣಿಕ ಚಟುವಟಿಕೆಗಳು

ಶೈಕ್ಷಣಿಕ ಚಟುವಟಿಕೆಗಳು

2016-17ನೇ ಸಾಲಿನ ಭೋದನಾ ಸಂಸ್ಥೆಯ ವಾರ್ಷಿಕ ವಿವರ
1. ಸಂಸ್ಥೆಯ ಹೆಸರು: ನೆಫ್ರೋಯುರಾಲಜಿ ಸಂಸ್ಥೆ ವಿಕ್ಟೋರಿಯಾಆಸ್ಪತ್ರೆ ಆವರಣ ಬೆಂಗಳೂರು.
2. ಸ್ಥಾಪನೆಯಾದ ವರ್ಷ: 2009-10
3. ಸರ್ಕಾರಿ ಆದೇಶದ ಸಂಖ್ಯೆ: ಹೆಎಫ್‌ಡಬ್ಯೂ  ಆರ್‌ಜಿ ಯು 2016 ದಿನಾಂಕ: 11.08.2016
4. ಅಪೆಕ್ಸ್ ಬಾಡಿ ಅನುಮೋದನೆ ನೀಡಿರುವ ಎಲ್ಲಾ ಕೋರ್ಸ (ಸೀಟು ಮತ್ತು ಉಲ್ಲೇಖ ಸಂಖ್ಯೆ): ಎo ಸಿ ಐ -23(1) 2009-ಎಂ.ಇ ಡಿ/71850 
5. ಆರ್ ಜಿ ಯು ಹೆಚ್ ಎಸ್ ಸಂಯೋಜನೆ ಉಲ್ಲೇಖಿತ ಸಂಖ್ಯೆ ಮತ್ತು ದಿನಾಂಕ : ಎ ಸಿಎ/ ಎಂ-57/2016-2017 ದಿನಾಂಕ:23.07.2016
6. ಕೋರ್ಸಗಳ ವಿವರ : ಎಂ ಸಿ ಹೆಚ್ ಯುರಾಲಜಿ ಮತ್ತು ಡಿ ಎಮ್ ನೆಫ್ರೋಲಜಿ
7. ಎಲ್ಲಾ ಕೋರ್ಸ ಪ್ರವೇಶಕ್ಕೆ ನೀಡಿರುವ ವಿವರ :  
ಸತತ ಹಿಂದಿನ ಮೂರು ವರ್ಷಗಳು

ಅನುಮೋದಿತ ಸೀಟುಗಳ ಸಂಖ್ಯೆ ದಾಖಾಲಾತಿಯ ವಿಧಗಳು   ದಾಖಲಾದ ವಿದ್ಯಾರ್ಥಿಗಳು
ಕೆ ಇ ಎ ಕೆ ಆರ್ ಎಲ್ ಎಂ ಕಾಮೆಡ್.ಕೆ ಎ ಎಂ ಪಿ ಸಿ ಕೆ ಇತರೆ  
2017-18 ಎಂ ಸಿ ಹೆಚ್ ಯುರಾಲಜಿ : 6
ಡಿ ಎಂ ನೆಫ್ರೋಯುರಾಜಿ : 2
        ಆರ್ ಜಿ ಯು ಹೆಚ್ ಎಫ್ ಮೂಲಕ    ಎಂ ಸಿ ಹೆಚ್ ಯುರಾಲಜಿ : 6
ಡಿ ಎಂ ನೆಫ್ರೋಯುರಾಜಿ : 2
2018-19 ಎಂ ಸಿ ಹೆಚ್ ಯುರಾಲಜಿ : 6
ಡಿ ಎಂ ನೆಫ್ರೋಯುರಾಜಿ : 2
            ಎಂ ಸಿ ಹೆಚ್ ಯುರಾಲಜಿ : 6
ಡಿ ಎಂ ನೆಫ್ರೋಯುರಾಜಿ : 2
2019-20 ಎಂ ಸಿ ಹೆಚ್ ಯುರಾಲಜಿ : 6
ಡಿ ಎಂ ನೆಫ್ರೋಯುರಾಜಿ : 4
            ಎಂ ಸಿ ಹೆಚ್ ಯುರಾಲಜಿ : 6
ಡಿ ಎಂ ನೆಫ್ರೋಯುರಾಜಿ : 4

Acadamic Activity

ನೆಫ್ರೋಯುರಾಲಜಿ ಸಂಸ್ಥೆಯು ಸ್ನಾತಕೋತ್ತರ ಕೋಸಗಳನ್ನು ಹೊಂದಿರುವ ಸೂಪರ್ ಸ್ಪೆಷಾಲಿಟಿ ಸಂಸ್ಥೆಯಾಗಿದೆ,ಸಂಸ್ಥೆಯು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಿoದ ಗುರುತಿಸಲ್ಪಟ್ಟಿದೆ ಹಾಗೂ ಕರ್ನಾಟಕ ರಾಜ್ಯ ಪ್ಯಾರಾ ಮೆಡಿಕಲ್ ಬೋರ್ಡ್ನೊಂದಿಗೆ ಡಯಾಲೀಸಿಸ್ ಟೆಕ್ನೀಷಿಯನ್ /ಎಕ್ಸರೇ ಟೆಕ್ನೀಷಿಯನ್/ ಒಟಿ ಟೆಕ್ನೀಷಿಯನ್/ಲ್ಯಾಬ್ ಟೆಕ್ನೀಷಿಯನ್ ಡಿಪ್ಲೋಮಾ ಕೋರ್ಸ್ಗೆ ನೋಂದಾಯಿಸಿಕೊoಡಿದೆ.

ಈ ಕೆಳಕಂಡ ಕೋರ್ಸಗಳು ಲಭ್ಯವಿದೆ.


ಎಂ ಸಿ ಹೆಚ್ ಯುರಾಲಜಿ   :  ಪ್ರತಿ ವರ್ಷ 6 ಸೀಟುಗಳು
ಡಿ ಎಂ ನೆಫ್ರೋಯುರಾಲಜಿ :  ಪ್ರತಿ ವರ್ಷ 4 ಸೀಟುಗಳು


ಆಯ್ಕೆಯ ವಿಧಾನ

ರಾಷ್ಟೀಯ ಮಟ್ಟದ ವಾರ್ಷಿಕ ಮುಕ್ತ ಪ್ರವೇಶ ಪರೀಕ್ಷೆ

ಶುಲ್ಕ ವಿವರ :

ಮೊದಲನೇ ವರ್ಷಕ್ಕೆ ಪ್ರಸ್ತುತ ರೂ.2,೦೦,೦೦೦/- ಶುಲ್ಕ +19,500 RGUHS Fees
ಎರಡನೇ ವರ್ಷಕ್ಕೆ ರೂ2,೦೦,೦೦೦/-
ಮೂರನೇ ವರ್ಷಕ್ಕೆ ರೂ2,೦೦,೦೦೦/-
ಶುಲ್ಕ ಪ್ರಮಾಣವು ಪೂರ್ವ ಸೂಚನೆ ಇಲ್ಲದೆ ಬದಲಾವಣೆಗೆ ಒಳಪಟ್ಟಿದೆ ಹಾಗೂ ಅಭ್ಯರ್ಥಿಗಳು ಮುಂಗಡವಾಗಿ ರೂ 1,೦೦,೦೦೦/- ಭದ್ರತಾ ಠೇವಣಿಯನ್ನು ಕಡ್ಡಾಯವಾಗಿ ಪಾವತಿಸಬೇಕು ಅಭ್ಯರ್ಥಿಗಳು ಕೋರ್ಸನ್ನು ಯಶಸ್ವಿಯಾಗಿ ಪೂರ್ಣಗೂಳಿಸಿದ ನಂತರ ಠೇವಣಿ ಮೊತ್ತವನ್ನು ಮುರು ಪಾವತಿಸಲಾಗುತ್ತದೆ


ಶುಲ್ಕ ವಿವರ ಕಿಕ್ಲ್ ಮಾಡಿ


ಶುಲ್ಕ ವಿವರ ಕಿಕ್ಲ್ ಮಾಡಿ


ವಿದ್ಯಾರ್ಥಿ ವೇತನ:

ಸಂಸ್ಥೆಯಲ್ಲಿ ಜಾರಿಯಲ್ಲಿರುವ ಮೇಲಿನ ಕೋರ್ಸನಲ್ಲಿ ಅಭ್ಯಾಸಿಸುವ ಎಲ್ಲಾ ಶೈಕ್ಷಣಿಕ ವರ್ಷದಲ್ಲಿ ಈ ಕೆಳಕಂಡoತೆ ಮಾಹೆವಾರು ವಿದ್ಯಾರ್ಥಿವೇತನ ನೀಡಲಗುವುದು.

ಮೊದಲನೇ ವರ್ಷ ರೂ 55೦೦೦/-
ಎರಡನೇ ವರ್ಷ ರೂ 60೦೦೦/-
ಮೂರನೇ ವರ್ಷ  ರೂ 65೦೦೦/-

 

ಸಾಮನ್ಯ ಷರತ್ತುಗಳು :

ಸಂಸ್ಥೆಯ ಮಾತೃ ಇಲಾಖೆಯ ನಿಯಮದ ಅನ್ವಯ ಈ ಕೋರ್ಸಗೆ ದಾಖಲಾತಿ ಹೊಂದುವ ಅಭ್ಯರ್ಥಿಗಳು ಕೋರ್ಸನ್ನು ಯಶಸ್ವಿಯಾಗಿ ಪೂರೈಸಿದ ನಂತರ ಎರಡು ವರ್ಷಗಳ ಕಾಲ ಈ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಸುತ್ತೇವೆಂದು ರೂ ೨೦೦/- ಚಾಪಕಾಗದದಲ್ಲಿ ಮುಚ್ಚಳಿಕೆಯನ್ನ ಕಡ್ಡಾಯ ಬರೆದುಕೊಡತಕ್ಕದ್ದು(ಸಂಬAಧಿತ ದಾಖಲೆ ಲಗತ್ತಿಸಿದೆ)


ರೀನಲ್ ಡಯಾಲಿಸಿಸ್‌ನಲ್ಲಿ ಫೆಲೋಷಿಪ್:


ಎಂ.ಡಿ(ಜನರಲ್ ಮೆಡಿಸಿನ್) ಅಥವಾ ಎಂಡಿ (ಪೀಡಿಯಾಟ್ರಿಕ್ಸ್) ವಿದ್ಯಾರ್ಹತೆ ಹೊಂದಿರುವ ಅಭ್ಯಾರ್ಥಿಗಳಿಗೆ ಈ ಸಂಸ್ಥೆಯಲ್ಲಿ ಒಂದು ವರ್ಷದ ರೀನಲ್ ಡಯಾಲಿಸಿಸ್‌ನಲ್ಲಿ ಫೆಲೋಷಿಪ್ ಕೋರ್ಸನ್ನು ನಡೆಸಲಾಗುತ್ತದೆ. ಪ್ರತಿ ವರ್ಷ ಎರಡು  ಬ್ಯಾಚ್‌ಗಳಲ್ಲಿ ಫೆಲೋಷಿಪ್‌ ಕೋಸ್‌ನ್ನು ನಡೆಸಲಾಗುತ್ತೆ. ಈ ಪೆಲೋಷಿಪ್ ಕೋರ್ಸ ಆರ್,ಜೆ,ಯು,ಹೆಚ್,ಎಫ್ ನಿಂದ ಗುರುತಿಸಲ್ವಟ್ಟಿದೆ.ಸಂಸ್ಥೆಗೆ ಅರ್ಜಿಯನ್ನು ಸಲ್ಲಿಸಿ ಮತ್ತು ಮೌಖಿಕ ಸಂದರ್ಶನದ ನಂತರ ಅಭ್ಯಾರ್ಥಿಗಳನ್ನು ಈ ಕೋರ್ಸಗೆ ಆಯ್ಕೆ ಮಾಡಲಾಗುತ್ತದೆ. ಆರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ಮತ್ತು ದಿನಾಂಕವನ್ನು ಸಂಸ್ಥೆಯ ವೆಬ್‌ಸೈಟ್ ಹಾಗೂ ರಾಜ್ಯದ ಪ್ರಚಲಿತ ದಿನಪತ್ರಿಕೆಗಳನ್ನು ಪ್ರಕಟಿಸಲಾಗುವುದು.

ಶುಲ್ಕ ವಿವರ:

ಆಯ್ಕೆಯಾದ ಅಭ್ಯರ್ಥಿಯು ಪ್ರಸ್ತುತ ಈ ಕೋರ್ಸಗೆ ರೂ 224೦೦/- ಶುಲ್ಕವನ್ನು ಪಾವತಿಸಿ ದಾಖಲಾತಿ ಪಡೆಯುವುದು, ಈ ಶುಲ್ಕವು ಬದಲಾವಣೆಗೆ ಒಳಪಟ್ಟಿರುತ್ತದೆ.

ವಿದ್ಯಾರ್ಥಿ ವೇತನ:

ಈ ಕೋರ್ಸಗೆ ಸಂಸ್ಥೆಯಲ್ಲಿ ದಾಖಲಾತಿ ಪಡೆದು ಕರ್ತವ್ಯ ನಿರ್ವಹಿಸುವ ಅಭ್ಯರ್ಥಿಗಳು ತಮ್ಮ ಅವಧಿಯಲ್ಲಿ ರೂ 3೦೦೦೦/- ವಿದ್ಯಾರ್ಥಿ ವೇತನ ಪಡೆಯುವರು.

ಸಾಮನ್ಯ ಷರತ್ತುಗಳು:


ರೀನಲ್ ಡಯಾಲಿಸಿಸ್‌ನಲ್ಲಿ ಫೆಲೋಷಿಪ್‌ಗೆ ದಾಖಲಾತಿ ಹೊಂದುವ ಅಭ್ಯರ್ಥಿಗಳು ಕೋರ್ಸನ್ನು ಯಶಸ್ವಿಯಾಗಿ ಪೂರೈಸಿದ ನಂತರ ಒಂದು ವರ್ಷಗಳ ಕಾಲ ಈ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತೇವೆಂದು ರೂ 2೦೦/- ಚಾಪಾಕಾಗದದಲ್ಲಿ ಮುಚ್ಚಳಿಕೆಯನ್ನು ಕಡ್ಡಾಯವಾಗಿ ಬರೆದುಕೊಡತಕ್ಕದ್ದು.(ಸಂಬoಧಿತ ದಾಖಲೆ ಲಗತ್ತಿಸದೆ)

 ಡಿಪ್ಲೊಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ:

ಶುಲ್ಕ ವಿವರ:ರೂ. 4000 / - ಪ್ರವೇಶದ 1, 2 ಮತ್ತು 3 ನೇ ವರ್ಷದಲ್ಲಿ ಮತ್ತು ರೂ. 4000 / - ಮುಂದಿನ ವರ್ಷಗಳಲ್ಲಿ.

ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ ಕೋರ್ಸ್ ಮತ್ತು ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ ಕೋರ್ಸ್.

 ಕ್ರಮ ಸಂಖ್ಯೆ
ಕೋರ್ಸ್ ಹೆಸರು
ಸೀಟುಗಳ ಸಂಖ್ಯೆ
1  ಡಿಪ್ಲೊಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ ಕೋರ್ಸ್  20
 ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ ಕೋರ್ಸ್ 10 
 ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ ಕೋರ್ಸ್ 20 
 ಡಿಪ್ಲೊಮಾ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಕೋರ್ಸ್ 20 

ಈ ಸಂಸ್ಥೆಯಲ್ಲಿ ಡಿಪ್ಲೋಮ ಇನ್ ಎಕ್ಸರೇ ಟೆಕ್ನಾಲಜಿ ಕೋರ್ಸ ಕೂಡ ಲಭ್ಯವಿದೆ.

ಈ ಸಂಸ್ಥೆಯಲ್ಲಿ ಬಿ.ಎಸ್.ಸಿ ರೀನಲ್ ಡಯಾಲಿಸಿಸ್ ಟೆಕ್ನಾಲಜಿ ಕೋರ್ಸ ಇದ್ದು ಆರ್ ಜಿ ಯು ಹೆಚ್ ಎಸ್ ನಿಂದ ಗುರುತಿಸಲ್ಪಟ್ಟಿದೆ.

ಕರ್ನಾಟಕ ರಾಜ್ಯ ಪ್ಯಾರ ಮೆಡಿಕಲ್ ಬೋರ್ಡನಿಂದ ಈ ಕೋರ್ಸಗಳು ಗುರುತಿಸ್ಪಟ್ಟಿದೆ.

ಈ ಕೋರ್ಸಗಳಿಗೆ ಅಭ್ಯರ್ಥಿಗಳನ್ನು ಕರ್ನಾಟಕ ರಾಜ್ಯ ಪ್ಯಾರಾ ಮೆಡಿಕಲ್ ಬೋರ್ಡನ ಕೌನ್ಸಿಲಿಂಗ್ ಪ್ರಕಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ,ಹಾಗೂ ಈ ಬಗ್ಗೆ ವಿವರಗಳನ್ನು ಪ್ಯಾರಾ ಮೆಡಿಕಲ್ ಮಂಡಳಿಯಿAದ ಪಡೆಯಬಹುದು.

ಕೋರ್ಸನ ಅವಧಿ :
ಕೋರ್ಸನ ಅವಧಿಯು 2 ವರ್ಷದ್ದಾಗಿದ್ದು ಅಭ್ಯರ್ಥಿಯು ಪಿಯುಸಿ ಅಥವಾ 10+2 ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಶುಲ್ಕ ವಿವರ :
ಮೊದಲನೇಯ ವರ್ಷ ದಾಖಲಾತಿಯ ಸಮಯದಲ್ಲಿ ರೂ 4೦೦೦/- ಪಾವತಿಸತಕ್ಕದ್ದು ಹಾಗೂ ನಂತರ ಪ್ರತಿ ವರ್ಷಗಳಲ್ಲಿ ರೂ 4೦೦೦/- ಪಾವತಿಸುವುದು.

ವಿದ್ಯಾರ್ಥಿ ವೇತನ :
ಈ ಕೋರ್ಸನಲ್ಲಿ ಅಭ್ಯಾಸಿಸುವ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಪಾವತಿಸುವುದಿಲ್ಲ.

ಇತರೆ ಕಾಲೇಜಿನ ಎಂ ಎಸ್ ಎಮ್‌ಡಿ ವಿದ್ಯಾಥಿಗಳಿಗೆ ತರಬೇತಿ ನೀಡುವುದು :

ಒಂದರಿAದ ಎರಡು ತಿಂಗಳ ಅವಧಿಗೆ ಇತರೆ ಕಾಲೇಜಿನ ಎಂ ಎಸ್ (ಜನರಲ್ ಸರ್ಜರಿ) ಎಂಡಿ (ಜನರಲ್ ಮೆಡಿಸಿನ್) ಅಭ್ಯಾಸಿಸುವ ವಿಧ್ಯಾರ್ಥಿಗಳಿಗೆ ಈ ಸಂಸ್ಥೆಯ ನೆಪ್ರೋ-ಯುರಾಲಜಿ ವಿಭಾಗದಲ್ಲಿ ತರಬೇತಿ ನೀಡಲಾಗುವುದು ಈ ಕೋರ್ಸಗೆ ಪ್ರತಿ ಅರ್ಜಿಗೆ ಅನುಗುಣವಾಗಿ ನಿಗಧಿತ ಶುಲ್ಕ ವಿಧಿಸಲಾಗುವುದು.
ಸ್ನಾತಕ / ಸ್ನಾತಕೋತರ ಸರ್ವಿಸ್ ಮತ್ತು ಇತರೆ ಅರೆ ವೈದ್ಯಕೀಯ ಕೋರ್ಸಗಳಲ್ಲಿ ಆಭ್ಯಾಸಿಸುತ್ತಿರುವ ವಿದ್ಯಾರ್ಥಿಗಳಿಗೂ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು.

 

 ಸಂಸ್ಥೆಯ ಶೈಕ್ಷಣಿಕ ಮಾಹಿತಿ

2021-22ನೇ ಸಾಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪರೀಕ್ಷಾ ಅಧಿಸೂಚನೆ

 

ಇತ್ತೀಚಿನ ನವೀಕರಣ​ : 20-11-2023 10:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೆಫ್ರೋ-ಯುರಾಲಜಿ ಸಂಸ್ಥೆ - ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080