ಅಭಿಪ್ರಾಯ / ಸಲಹೆಗಳು

ಸೇವೆಗಳು ಮತ್ತು ಯೋಜನೆಗಳು

  ಟಿ.ಎಸ್.ಪಿ
  ಎಸ್.ಸಿ,ಎಸ್.ಪಿ
  ಪ್ರಧಾನ ಮಂತ್ರಿಗಳ ಪರಿಹಾರ ನಿಧಿ.
  ಮಾನ್ಯ ಮುಖ್ಯರವರ ವೈದ್ಯಕೀಯ ಪರಿಹಾರ ನಿದಿ.
  ಕಿಡ್ನಿ ಸುರಕ್ಷಾ ಯೋಜ.
  ಆಯುಷ್ಮಾನ್ ಭಾರತ.
  ಆರೋಗ್ಯ ಕರ್ನಾಟಕ ಯೋಜ.
  ಜ್ಯೋತಿ ಸಂಜೀವಿನಿ ಯೋಜನೆ
  ಸಿ.ಜಿ.ಹೆಚ್.ಎಸ್.
 

ಬಿಪಿಎಲ್.

  ಸ್ಕೀಮ್ ಸುತ್ತೋಲೆ   new
                                                             ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ
ಯೋಜನೆಯ ಫಲಾನುಭವಿಗಳು
ಯೋಜನೆಯ ಅಡಿಯಲ್ಲಿ ಆರೋಗ್ಯ ರಕ್ಷಣೆ ಸೌಲಭ್ಯ ಪಡೆಯಲು ರೋಗಿಗಳನ್ನು ಈ ಕೆಳಕಂಡ ವರ್ಗಗಳಾಗಿ ವಿಂಗಡಿಸಲಾಗಿದೆ.
•    ಅರ್ಹತಾ ರೋಗಿಗಳು : ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಹಾಗೂ “2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ” ಪ್ರಕಾರ ಅರ್ಹತಾ ಕುಟುಂಬಕ್ಕೆ ಸೇರಿರುವ ರೋಗಿಗಳು.(ಬಿ.ಪಿ.ಎಲ್ ರೇಶನ್ ಕಾರ್ಡ ಹೊಂದಿದವರು)

•    ಸಾಮಾನ್ಯ ರೋಗಿಗಳು : ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಹಾಗೂ 2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಪ್ರಕಾರ ಅರ್ಹತಾ ಕುಟುಂಬದ ಕಾರ್ಡನ್ನು ಹೊಂದಿಲ್ಲದ ಅಥವಾ ಅರ್ಹತಾ ಕಾರ್ಡನ್ನು ಹಾಜರು ಪಡಿಸಲಾಗದ ರೋಗಿಗಳು. (ಎ.ಪಿ.ಎಲ್ ರೇಶನ್ ಕಾರ್ಡ ಹೊಂದಿದವರು)

•    BPL/APL  ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ ತರತಕ್ಕದ್ದು

                                                           ಆಯುಷ್ಮನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆ

ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಸಂಯೋಜೆತ ಯೋಜನೆ ಎಲ್ಲರಿಗೂ ಆರೋಗ್ಯ ಎಲ್ಲೆಡೆಯ ಆರೋಗ್ಯ ಎಂಬ ದ್ಯಾಯ ವಾಕ್ಯದೋತನ ಕರ್ನಾಟಕದಲ್ಲಿ ವಾಸಿಸುವ ಎಲ್ಲಾ ನಾಗರಿಕರಿಗೂ ಉತ್ತಮ ಆರೋಗ್ಯ ಒದಗಿಸುವ ಒಂದು ಕಾರ್ಯಕ್ರಮವಾಗಿದೇ.
ಸದರಿಯೋಜನೆ ಆಡಿಯಲ್ಲಿ, VAS , ಯಶ್ವನಿ , ಇಂದಿರಾ ಸುರಕ್ಷಾ , RBSK , ರಾಜೀವ್ ಆರೋಗ್ಯಭಾಗ್ಯ ಈ ಮೇಲಿನ ಯೋಜನೆಗಳನ್ನು ಸಂಯೂಗಳನ್ನು ಸಂಯೋಚಿಸಿ ಆಯುಷ್ಮನ್ ಭರತ್ ಆರೋಗ್ಯ ಕರ್ನಾಟಕ ಯೋಜನೆ ಎಂಬ ಒಂದು ಸಾರ್ವತ್ರಿಕ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಆರೋಗ್ಯಕರ್ನಾಟಕ ಎಂಬ ಸಾರ್ವತ್ತಿಕ ಆರೋಗ್ಯ ರಕ್ಷಣಾ ಯೋಜನೆಯನ್ನು 02.03.2018ರಿಂದ ರಾಜ್ಯದಲ್ಲಿ ಅನುಷ್ಠನಗೊಳಿಸಲಾಗುತ್ತಿದ್ದು ಆಯುಷ್ಮನ್ ಭರತ್ ಎಂಬ ಆರೋಗ್ಯ ಭದ್ರತಾಯೋಜನೆಯನ್ನು 25.09.2018ರಿಂದ ಕೇಂದ್ರ ಸರ್ಕಾರ ಜಾರಿಗೂಳಿಸಿರುತ್ತದೆ.
ಈ ಎರಡುಯೋಜನೆಗಳ ಉದ್ದೇಶ ವ್ಯಾಪ್ತಿಗಳಲ್ಲಿ ಹೋಲಿಕೆ ಇದ್ದು ಎರಡು ಯೋಜನೆಗಳನ್ನು ಸಂಯೋಜನೆ “ ಆಯುಷ್ಮನ್ ಭರತ್ – ಆರೋಗ್ಯಕರ್ನಾಟಕ “ ಯೋಜನೆಯನ್ನು ಜಾರಿಗೂಳಿಸಲು ಕೇಂದ್ರ ಸರ್ಕಾರದೊಂದಿಗೆ ದಿನಾಂಕ : 30.10.2018 ರಂದು ಬಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದರಂತೆ ಸಂಯೋಜಿತ ಯೋಜನೆ ರಾಜ್ಯದಲ್ಲಿ ಜಾರಿಯಲ್ಲಿರುತ್ತದೆ.

ಯೋಜನೆಯ ಸೌಆಲಭ್ಯ ಪಡೆಯುವುದು ಹೇಗೆ ?
•    ರೋಗಿಗಳು ತಮ್ಮ ಪಡಿತರ ಚೀಟಿ ಮತ್ತು ಆಧಾರ ಕಾರ್ಡ್ನೊಂದಿಗೆ ಹತ್ತಿರ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು.
•    ಯೋಜನೆಯಲ್ಲಿ ನೋಂದಣಿ ಮಾಡಿ “ಎಬಿ-ಎಆರ್‌ಕೆ” ಆರೋಗ್ಯ ಕಾರ್ಡ್ ಪಡೆಯಬಹುದು.
•    ಸದರಿ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.
•    ಅದೇ ಸರ್ಕಾರಿ ಆಸ್ಪತ್ರೆಯು ಚಿಕಿತ್ಸೆ ನೀಡುವ ಸಾಮಥÀ್ರ್ಯ ಹೊಂದಿದ್ದಲ್ಲಿ ಅಲ್ಲಿಯೇ ರೋಗಿಗೆ ಚಿಕಿತ್ಸೆ ನೀಡಲಾಗುತ್ತದೆ.
•    ಸದರಿ ಸರ್ಕಾರಿ ಆಸ್ಪತ್ರೆಯು ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿಲ್ಲದಿದ್ದರೆ ರೆಫರಲ್ ನೀಡಲಾಗುತ್ತದೆ, ರೆಫರಲ್ ಪಡೆದುಕೊಂಡ ರೋಗಿಯು ತಾನು ಇಚ್ಚಿಸುವ    ಯಾವುದೇ ನೋಂದಾಯಿತ ಖಾಸಗಿ ಅಥವಾ  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
•    ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆ ಹೋಗಿ ಚಿಕಿತ್ಸೆ ಪಡೆಯಬಹುದು.
•    ರೋಗಿಯ ಆರೋಗ್ಯ ಸ್ಥಿತಿ ಸ್ಥಿರಗೊಂಡು ಕೊಡಲೇ ಚಿಕಿತ್ಸೆ ನೀಡದ ಆಸ್ಪತ್ರೆ ಪಡಿತರ ಚೀಟಿಯನ್ನು ಸಲ್ಲಿಸತಕ್ಕದ್ದು.


ಅಂಗಾಗ ಕಸಿ ಯೋಜನೆ

ರಾಜ್ಯ ಸರ್ಕಾರವು ಬಡವರು/ಬಿಪಿಎಲ್ ರೋಗಿಗಳಿಗೆ ಅಂಗಾಗ ಕಸಿ ಯೋಜನೆಯನ್ನು ಸರ್ಕಾರಿ ಆದೇಶ ಸಂಖ್ಯೆ: ಹೆಚ್‌ಎಫ್.ಡಬ್ಲೂö್ಯ/64/ಇಪಿಎಫ್/2018 ಅನ್ವಯ ದಿನಾಂಕ : 03.12.2018 ರಿಂದ ಜಾರಿಗೊಳಿಸಿದೆ.
•    ಈ ಯೋಜನೆಯು ಬಡವರು/ಬಿಪಿಎಲ್ ರೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ, ರೋಗಿಯು ತಮ್ಮ ಹತ್ತಿರದ ಸಂಬAಧಿಯಿAದ ಅಂಗಾಗ ದಾನ ಪಡೆದುಕೊಂಡಾಗ ಅಂತಹ ಅಂಗಾಗ ಕಸಿ ಶಸ್ತçಚಿಕಿತ್ಸೆಯನ್ನು ನೋಂದಾಯಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಲಾಗುವುದು.
•    ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ ಅಂಗಾಗ ಕಸಿ ಶಸ್ತçಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಶ್ರೀ.ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹೃದಯ ಅಂಗಾಗ ಕಸಿ ಶಸ್ತçಚಿಕಿತ್ಸೆ, ಇನ್ಸ್ಟಿಟ್ಯೂಟ್ ಆಫ್ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ಕಿಡ್ನಿ ಅಂಗಾಗ ಕಸಿ ಶಸ್ತçಚಿಕಿತ್ಸೆ ಹಾಗೂ ಪಿ.ಎಂ.ಎಸ್.ಎಸ್.ವೈ. ಆಸ್ಪತ್ರೆಯಲ್ಲಿ ಲಿವರ್ ಅಂಗಾಗ ಕಸಿ ಶಸ್ತçಚಿಕಿತ್ಸೆಯನ್ನು ನಡೆಸಲಾಗುತ್ತಿದೆ.

 ಪರಿಶಿಷ್ಟ ಜಾತಿ ಉಪಯೋಜನೆ (SCSP):

ಕರ್ನಟಕ ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಉಪಯೋಜನೆಗಾಗಿ ಈ ಸಂಸ್ಥೆಗೆ ಪ್ರತ್ಯೇಕ ಅನುದಾನವನ್ನು ನೀಡಲಾಗುತ್ತಿದ್ದು, ಕರ್ನಾಟಕ ರಾಜ್ಯದ ನಿವಾಸಿಯಾಗಿರುವ ಹಾಗೂ ಕರ್ನಾಟಕ ಸರ್ಕಾರದಿಂದ ಪರಿಶಿಷ್ಟ ಜಾತಿ ಎಂದು ಜಾತಿ ದೃಢೀಕರಣ ಪತ್ರವನ್ನು ಹೊಂದಿರುವ ರೋಗಿಗಳು ಚಿಕಿತ್ಸೆಗಾಗಿ ಈ ಸಂಸ್ಥೆಗೆ ಬಂದಲ್ಲಿ ಅವರುಗಳಿಗೆ ಹೊರರೋಗಿ ಮತ್ತು ಒಳರೋಗಿ ನೋಂದಣಿ ಶುಲ್ಕ ಹೊರತುಪಡಿಸಿ, ಎಲ್ಲಾ ರೀತಿಯ ಚಿಕಿತ್ಸೆಯನ್ನು ಅಗತ್ಯ ದಾಖಲೆಗಳನ್ನು ಒದಗಿಸಿ ಸಂಸ್ಥೆಯಲ್ಲಿ ಅನುದಾನ ಲಭ್ಯವಿರುವವರೆಗೂ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ. 

 ಗಿರಿಜನ (ಪರಿಶಿಷ್ಟ ಪಂಗಡ) ಉಪಯೋಜನೆ (TSP) :

ಕರ್ನಟಕ ರಾಜ್ಯ ಸರ್ಕಾರದಿಂದ ಗಿರಿಜನ (ಪರಿಶಿಷ್ಟ ಪಂಗಡ) ಉಪಯೋಜನೆಗಾಗಿ ಈ ಸಂಸ್ಥೆಗೆ ಪ್ರತ್ಯೇಕ ಅನುದಾನವನ್ನು ನೀಡಲಾಗುತ್ತಿದ್ದು, ಕರ್ನಾಟಕ ರಾಜ್ಯದ ನಿವಾಸಿಯಾಗಿರುವ ಹಾಗೂ ಕರ್ನಾಟಕ ಸರ್ಕಾರದಿಂದ ಗಿರಿಜನ (ಪರಿಶಿಷ್ಟ ಪಂಗಡ) ಎಂದು ಜಾತಿ ದೃಢೀಕರಣ ಪತ್ರವನ್ನು ಹೊಂದಿರುವ ರೋಗಿಗಳು ಚಿಕಿತ್ಸೆಗಾಗಿ ಈ ಸಂಸ್ಥೆಗೆ ಬಂದಲ್ಲಿ ಅವರುಗಳಿಗೆ ಹೊರರೋಗಿ ಮತ್ತು ಒಳರೋಗಿ ನೋಂದಣಿ ಶುಲ್ಕ ಹೊರತುಪಡಿಸಿ, ಎಲ್ಲಾ ರೀತಿಯ ಚಿಕಿತ್ಸೆಯನ್ನು ಅಗತ್ಯ ದಾಖಲೆಗಳನ್ನು ಒದಗಿಸಿ ಸಂಸ್ಥೆಯಲ್ಲಿ ಅನುದಾನ ಲಭ್ಯವಿರುವವರೆಗೂ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ. 

                                                                 ‘ಜ್ಯೋತಿ ಸಂಜೀವಿನಿ’ ಯೋಜನೆ

 

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ತೃತಿಯ ಹಂತದ ತುರ್ತು ಚಿಕಿತ್ಸೆಗಳನ್ನು ಒದಗಿಸುವುದು ‘ಜ್ಯೋತಿ ಸಂಜೀವಿನಿ’ ಯೋಜನೆಯ ಉದ್ದೇಶವಾಗಿರುತ್ತದೆ.ನೋಂದಾಯಿತ ಆಸ್ಪತ್ರೆಗಳ ಪಟ್ಟಿಯು ವೆಬ್‌ಸೈಟ್: www.sat.gov.in/home ನಲ್ಲಿ ಲಭ್ಯವಿರುತ್ತದೆ.

ಯೋಜನೆಯ ಫಲಾನುಭವಿಗಳು:

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರು ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ಜೆ.ಎಸ್.ಎಸ್ ಯೋಜನೆಗೆ ಒಳಪಡುವ ಫÀಲಾನುಭವಿಗಳಿಗೆ 1068 ಚಿಕಿತ್ಸಾ ವಿಧಾನಗಳು ಲಭ್ಯವಿದ್ದು, 143 ಚಿಕಿತ್ಸಾ ವಿಧಾನಗಳು ಯುರಾಲಜಿ ವಿಭಾಗದಲ್ಲಿ ಬರುತ್ತದೆ.

ಫಲಾನುಭವಿ ಸರ್ಕಾರಿ ನೌಕರನ ಗುರುತಿನ ಮಾನದಂಡ:


ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೆಚ್‌ಆರ್‌ಎಂಎಸ್ ಡಾಟಾ ಬೇಸ್‌ನೊಂದಿಗೆ ಸಮನ್ವಯಿತಗೊಂಡಿರುವ ಸರ್ಕಾರಿ ನೌಕರನ ಕೆಜಿಐಡಿ ಪಾಲಿಸಿ ಸಂಖ್ಯೆಯು ಸರ್ಕಾರಿ ನೌಕರರ ಗುರುತಿನ ಮಾನದಂಡವಾಗಿರುತ್ತದೆ.

ಅರ್ಹತೆ:


ರಾಜ್ಯ ಸರ್ಕಾರದ ನೌಕರರು ಮತ್ತು ಸರ್ಕಾರದ ಸೇವಾ ನಿಯಮಾವಳಿಗಳ ಅಡಿಯಲ್ಲಿ ಬರುವ ಅವರ ಕುಟುಂಬದ ಅವಲಂಬಿತ ಸದಸ್ಯರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಾವಳಿ-1963ರ ನಿಯಮ 2(1)ರ (i)(ii) ಮತ್ತು (iii) ರನ್ವಯ ಸರ್ಕಾರಿ ನೌಕರರ ಕುಟುಂಬದ ಅವಲಂಬಿತ ಸದಸ್ಯರನ್ನು ಈ ಕೆಳಕಂಡoತೆ ವ್ಯಾಖ್ಯಾನಿಸಲಾಗಿರುತ್ತದೆ:•ಸರ್ಕಾರಿ ನೌಕರರ ಪತ್ನಿ ಅಥವಾ ಪತಿ.
•ಸರ್ಕಾರಿ ನೌಕರರ ತಂದೆ ಮತ್ತು ತಾಯಿ (ಮಲತಾಯಿ ಒಳಗೊಂಡAತೆ) ಇವರು ಸರ್ಕಾರಿ ನೌಕರರ ಜೊತೆಯಲ್ಲಿ ಸಾಮಾನ್ಯವಾಗಿ ವಾಸವಿರತಕ್ಕದ್ದು ಮತ್ತು ಇವರ ಮಾಸಿಕ ಆದಾಯ ಒಟ್ಟು ರೂ 6,000/- ಗಳನ್ನು ಮೀರತಕ್ಕದ್ದಲ್ಲ.
•ಸರ್ಕಾರಿ ನೌಕರರ ಮೇಲೆ ಸಂಪೂರ್ಣವಾಗಿ ಅವಲಂಬಿಸಿರುವ ಮಕ್ಕಳು (ದತ್ತು ಮಕ್ಕಳು ಮತ್ತು ಮಲ-ಮಕ್ಕಳು ಒಳಗೊಂಡoತೆ) ಸರ್ಕಾರಿ ನೌಕರರು ತನ್ನ ಕುಟುಂಬದ ಸದಸ್ಯರ ಅವಲಂಬನೆಯ ಕುರಿತು ಪ್ರಮಾಣಿತ ಘೋಷಣೆಯನ್ನು ಸಲ್ಲಿಸತಕ್ಕದ್ದು.

 ಈ ಕೆಳಕಾಣಿಸಿದ ಸಂದರ್ಭಗಳನ್ನು ಹೊರತುಪಡಿಸಿ ಫಲಾನುಭವಿಗಳಿಗೆ ಒದಗಿಸುವ ವೈದ್ಯಕೀಯ ನೆರವು ಸಂಪೂರ್ಣವಾಗಿ ನಗದುರಹಿತವಾಗಿರುತ್ತದೆ.

•ಯೋಜನೆಯಲ್ಲಿ ನಿಗದಿಪಡಿಸಿರುವ ಬೆನಿಫಿಟ್ ಪ್ಯಾಕೇಜ್‌ನ ದರಗಳಿಗಿಂತ ಹೆಚ್ಚು ದರದ ಸ್ಟೆಂಟ್, ಪ್ರೋಸ್ತೆಸಿಸ್ ಮತ್ತು ಇಂಪ್ಲಾoಟ್ಸ್ಗಳ ಅಳವಡಿಕೆಯನ್ನು ಫಲಾನುಭವಿಯು ಬಯಸಿದ್ದಲ್ಲಿ / ಆಯ್ಕೆ ಮಾಡಿಕೊಂಡಲ್ಲಿ.

•ಯೋಜನೆಯಲ್ಲಿ ನಿಗದಿ ಪಡಿಸಿದ ವಾರ್ಡ್ ಸೌಲಭ್ಯಕಿಂತ ಉನ್ನತ ದರ್ಜೆಯ ವಾರ್ಡ್ ಸೌಲಭ್ಯಗಳನ್ನು ಫಲಾನುಭವಿಯು ಆಯ್ಕೆ ಮಾಡಿಕೊಂಡಲ್ಲಿ.

•ಮೇಲಿನ ಸಂದರ್ಭಗಳಲ್ಲಿ ಫಲಾನುಭವಿಯು ಹೆಚ್ಚುವರಿ ದರಗಳನ್ನು ಭರಿಸತಕ್ಕದ್ದು.

 ಹೆಚ್ಚು...
 

 

ಇತ್ತೀಚಿನ ನವೀಕರಣ​ : 28-03-2022 03:59 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನೆಫ್ರೋ-ಯುರಾಲಜಿ ಸಂಸ್ಥೆ - ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080